ಅಂತರ್ಗತ ಪರಿಸರ ವ್ಯವಸ್ಥೆಯತ್ತ ನಮ್ಮ ಮೊದಲ ಹೆಜ್ಜೆ: Accel Atoms ವೆಬ್ಸೈಟ್ನಲ್ಲಿ ಬಹುಭಾಷಾ ಬೆಂಬಲ
121+ ಭಾಷೆಗಳು
19500+ ಉಪಭಾಷೆಗಳು
140,00,00,000+ ವ್ಯಕ್ತಿಗಳು
ಭಾರತವು ತನ್ನ ಜನಸಂಖ್ಯೆಯ ಮೂಲಕ ಮಾತ್ರವಲ್ಲದೆ, ಅದರ ಹಲವಾರು ಭಾಷೆಗಳು ಮತ್ತು ಉಪಭಾಷೆಗಳಿಂದಲೂ ವೈವಿಧ್ಯಮಯವೆನಿಸಿಕೊಂಡಿದೆ
ಕಳೆದ ಮೂರು ವರ್ಷಗಳಲ್ಲಿ, ಭಾರತದಾದ್ಯಂತ ಸಾವಿರಾರು ಸಂಸ್ಥಾಪಕರೊಂದಿಗೆ ಮಾತನಾಡುವ ಹಾಗೂ ವಿವಿಧ ಕ್ಷೇತ್ರಗಳು ಮತ್ತು ಭೌಗೋಳಿಕತೆಯಾದ್ಯಂತ ನಿರ್ಮಿಸುವ ಸವಲತ್ತು ನಮಗೆ ಸಿಕ್ಕಿದೆ.
ನಾವು ಒಂದು ಮೂಲಭೂತ ಸತ್ಯವನ್ನು ಅರಿತುಕೊಂಡಿದ್ದೇವೆ - ಸಂಸ್ಥಾಪಕರು ಚೌಕಟ್ಟಿಗೆ ಹೊಂದಿಕೆಯಾಗುವುದಿಲ್ಲ ಹಾಗೂ ಇಬ್ಬರು ಸಂಸ್ಥಾಪಕರು ಒಂದೇ ಆಗಿರುವುದಿಲ್ಲ. ಮುಖ್ಯವಾಗಿ, ನಿರ್ದಿಷ್ಟ ಭಾಷೆ ಅಥವಾ ಉಪಭಾಷೆಯನ್ನು ತಿಳಿದುಕೊಳ್ಳಲು ಯಾವುದೇ ಅಡೆತಡೆಗಳಿಲ್ಲದೆ ಉದ್ಯಮಶೀಲತೆಯು ರಾಷ್ಟ್ರವ್ಯಾಪಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ.
ಸ್ಪಿನ್ನಿಯ ಸಂಸ್ಥಾಪಕ ನೀರಜ್ ಸಿಂಗ್ ಅವರು ಒಂದು ಉತ್ತಮ ಉದಾಹರಣೆ. ಅವರು ಜಾರ್ಖಂಡ್ನ ದಾಲ್ತೋಂಗಂಜ್ನಲ್ಲಿ ಬೆಳೆದಿರುತ್ತಾರೆ ಹಾಗೂ ಹಿಂದಿ-ಮಾಧ್ಯಮ ಶಾಲೆಯಲ್ಲಿ ಓದಿರುತ್ತಾರೆ. ತಮ್ಮ ಜೀವನದಲ್ಲಿ ಅವರು ಬಹಳ ಸಮಯದ ನಂತರ ಇಂಗ್ಲಿಷ್ ಕಲಿಯಲು ಪ್ರಾರಂಭಿಸಿದರು, ಹಾಗೂ ಭಾಷೆ ಎಂದಿಗೂ ತಡೆಗೋಡೆಯಾಗಿರಲಿಲ್ಲ ಅಥವಾ ಅದು ನೀರಜ್ ಅವರನ್ನು ಹಿಮ್ಮೆಟ್ಟಿಸಲಿಲ್ಲ!
ಸ್ಪಿನ್ನಿಯು, ಇತ್ತೀಚಿನ ದಿನಗಳಲ್ಲಿ ಬಳಸಿದ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದು, ಭಾರತದಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ
ಭಾಷಾ ಅಡೆತಡೆಗಳನ್ನು ಮುರಿದು ಯಾವುದನ್ನಾದರೂ ಉತ್ತಮವಾಗಿ ನಿರ್ಮಿಸಿರುವ ಸಂಸ್ಥಾಪಕರ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ . ಮುಂದೆ ಒಂದು ಪ್ರಶ್ನೆಯು ಉದ್ಭವಿಸುತ್ತದೆ, "ಭಾಷೆಯನ್ನು ಪರಿಗಣಿಸದೆ ಅತ್ಯುತ್ತಮ ಸಂಸ್ಥಾಪಕರು ಮತ್ತು ಅವರ ಆಲೋಚನೆಗಳನ್ನು ಸಕ್ರಿಯಗೊಳಿಸುವ ಅಂತರ್ಗತ ಪರಿಸರ ವ್ಯವಸ್ಥೆಯನ್ನು ನಾವು ಯಾವೇ ರೀತಿಯಲ್ಲಿ ನಿರ್ಮಿಸುತ್ತೇವೆ?"
ಸೇರ್ಪಡೆಯು ಫೌಂಡೇಶನ್ ಮೂಲಕ ಪ್ರಾರಂಭವಾಗುತ್ತದೆ ಹಾಗೂ ಅದರತ್ತ ಒಂದು ಹೆಜ್ಜೆ ಇಡುವುದು ಎಂದರೆ ಭಾರತದಲ್ಲಿ ಯಾರಾದರೂ ಓದಬಹುದಾದ ಹಾಗೂ ಅರ್ಥಮಾಡಿಕೊಳ್ಳಬಹುದಾದ ವೆಬ್ ಸೈಟ್.
ಇಂದು, ಇಂಗ್ಲಿಷ್ ಜೊತೆಗೆ, ನಾವು ಸುಧಾರಣೆ ತರುವಲ್ಲಿ ಐದು ಹೊಸ ಭಾರತೀಯ ಭಾಷೆಗಳಲ್ಲಿ Accel Atoms ವೆಬ್ಸೈಟ್ ಅನ್ನು ಪರಿಚಯಿಸುತ್ತಿದ್ದೇವೆ.
- ಕನ್ನಡ
- ಮರಾಠಿ
- ಹಿಂದಿ
- ತಮಿಳು
- ತೆಲುಗು
Accel Atoms ಯಾವಾಗಲೂ ಶಾಶ್ವತ ಸುಧಾರಣೆ ತರುವುದರಲ್ಲಿದೆ ಹಾಗೂ ನಮ್ಮ ಹೊಸ ಬಹುಭಾಷಾ ವೈಶಿಷ್ಟ್ಯವು ಭಾರತದಲ್ಲಿನ ಎಲ್ಲಾ ಸಂಸ್ಥಾಪಕರಿಗೆ ಅಂತರ್ಗತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಹಂತಗಳ ಸರಣಿಯಲ್ಲಿ ಮೊದಲನೆಯದಾಗಿದೆ. ನೀವು ಇದನ್ನು ಸಹಾಯಕವಾಗಬಹುದಾದ ಸಂಸ್ಥಾಪಕರೊಂದಿಗೆ ಹಂಚಿಕೊಂಡರೆ ನಾವು ನಿಮಗೆ ಕೃತಜ್ಞರಾಗಿರುತ್ತೇವೆ. :
ದಯವಿಟ್ಟು ವೆಬ್ಸೈಟ್ನ ಮೇಲ್ಭಾಗದಲ್ಲಿರುವ ಭಾಷಾ ಟಾಗಲ್ನೊಂದಿಗೆ ಈಗಲೇ ಪ್ರಯತ್ನಿಸಿ ಹಾಗೂ ಯಾವುದೇ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
Accel Atoms, ಕಮ್ಯೂನಿಟಿ ಕಾರ್ಯಕ್ರಮಗಳು ಮತ್ತು ಅದರ ಪೋರ್ಟ್ಫೋಲಿಯೊ ಕಂಪನಿಗಳ ಕುರಿತು ಅಪ್ಡೇಟ್ ಆಗಿರಿ